ಬಸವ ಧರ್ಮ ತತ್ವ ಸಿದ್ದಾಂತಗಳು

 • 1 ನಿರಾಕಾರ ಲಿಂಗರೂಪಿ ಜ್ಯೋತಿರೂಪ ಶಿವನು ಶಾಶ್ವತವಾಗಿ ನಿನ್ನನ್ನು ರಕ್ಷಿಸುವನು.
 • 2 ಗುರು ಬಸವಣ್ಣನವರು ನಿನಗೆ ಪ್ರಕಾಶಮಾನವಾದ ಜ್ಞಾನದ ಬೆಳಕನ್ನು ಕೊಡುವರು.
 • 3 ದೇವರ ಕರುಣೆಯಿಂದ ನಮ್ಮ ಸಂಕಲ್ಪಗಳು ನೆರವೇರುವುದು.
 • 4 ದೇವರಿಂದಲೇ ನೀತಿವಂತರ ರಕ್ಷಣೆಯಾಗುತ್ತದೆ, ಸಂಶಯ ಬೇಡ.
 • 5 ಆನಂದ ಪಡುವಂತೆ ದೇವರು ಎಲ್ಲರನ್ನು ಸಂತೈಸುತ್ತಾನೆ.
 • 6 ನೀತಿವಂತನು ದೇವರ ನಂಬಿಕೆಯಿಂದಲೇ ಬದುಕುವನು.
 • 7 ಮಾನವ ಸಮಾಜದಲ್ಲಿ ಒಬ್ಬರಿಗೊಬ್ಬರು ಪ್ರೀತಿ ಕರುಣೆಗಳನ್ನು ತೋರಿಸಿರಿ.
 • 8 ತನ್ನ ಪಾಲಿನ ಆಹಾರವನ್ನು ವಸ್ತ್ರವನ್ನು ಸಂಪಾದಿಸಿಕೊಳ್ಳುವವನು ಧನ್ಯನು.
 • 9 ದೇವರ ಕಡೆ ತಿರುಗಿ ಮುಖ ಮಾಡಿ, ಸಂಕಷ್ಟದಿಂದ ಪಾರಾಗುವಿರಿ.
 • 10 ಸೃಷ್ಟಿಕರ್ತನಾದ ದೇವರನ್ನು ಧರಿಸಿಕೊಳ್ಳಿರಿ ಅವನಿಗೆ ನಿಮ್ಮ ಹೃದಯದಲ್ಲಿ ಸ್ಥಾನ ಕೊಡಿರಿ.
 • 11 ಏಕೈಕನಾದ ನಿರಾಕಾರ ಪರಮಾತ್ಮನನ್ನು ನಂಬಿದವರು ನೆಮ್ಮದಿಯ ಆಶ್ರಯಗಳಲ್ಲಿ ನೆಲೆಗೊಳ್ಳುವರು.
 • 12 ನಾವು ಅನಾಥರಲ್ಲ ದೇವರು ನಮ್ಮನ್ನು ಅನಾಥರಾಗಿ ಬಿಡುವುದಿಲ್ಲ.
 • 13 ನೀವು ನಿಮ್ಮ ಮನೆಯೊಳಗೆ ಸಮಾಧಾನವಾಗಿದ್ದರೆ ಹೊರಗಡೆಯೂ ಸಮಾಧಾನವಾಗಿರುತ್ತೀರಿ.
 • 14 ದೇವರು ನಿನ್ನ ಪಾಲಿಗೆ ಕೊಟ್ಟಿರುವುದನ್ನು ಕಾಪಾಡಿಕೋ, ಹೆಚ್ಚು ಆಸೆಬೇಡ.
 • 15 ಒಳ್ಳೆಯ ಮನಸಾಕ್ಷಿಯನ್ನು ಇಟ್ಟುಕೊಂಡು ಬದುಕು, ಮೋಸಬೇಡ.
 • 16 ದೇವರ ಸೃಷ್ಟಿಯನ್ನು, ವ್ಯಾಪ್ತಿಯನ್ನು ನೋಡಿ ಆನಂದಿಸಿ, ಉಲ್ಲಾಸಪಡಿರಿ, ಊಹಿಸಿರಿ.
 • 17 ದೇವರಿಗೆ ಸಂಪೂರ್ಣವಾಗಿ ಶರಣಾದವನು ಶುಭವನ್ನು ಹೊಂದುವನು.
 • 18 ಸತ್ಯಶುದ್ಧ ಕಾಯಕಕ್ಕೆ ಪರಮಾತ್ಮ ಪ್ರತಿಫಲವನ್ನು ಕೊಡುವನು.
 • 19 ಪ್ರಕೃತಿಯ ನಿಯಮಕ್ಕೆ ಒಳಪಟ್ಟು ಸಮಾಧಾನಹೊಂದು ದುಃಸ್ಸಾಹಸಬೇಡ.
 • 20 ಧರ್ಮಮಾರ್ಗ, ಇದು ಸತ್ಯದ ಮಾರ್ಗ, ಇದು ದೇವರನ್ನು ತಲುಪುವ ಮಾರ್ಗ.
 • 21 ಸೇವೆಯೇ ನಿಮ್ಮ ಗುರಿಯಾಗಲಿ ದೇವರೇ ನಿಮ್ಮ ಬಲವಾಗಲಿ
 • 22 ನೀತಿ ಮತ್ತು ಜ್ಞಾನಕ್ಕೆ ಹಸಿದು ಬಾಯಾರಿದವನು ಧನ್ಯನು.
 • 23 ಸರ್ವಶಕ್ತನಾದ ಪರಮಾತ್ಮನಿಗೆ ಎಲ್ಲವೂ ಗೋಚರವಾಗುವುದು.
 • 24 ಇಷ್ಟಲಿಂಗ ರೂಪದಲ್ಲಿ ದೇವರನ್ನು ನಿತ್ಯವೂ ದರ್ಶಿಸಲು ಅಪೇಕ್ಷಿಸಿರಿ.
 • 25 ಸದಾಚಾರ ಅಭ್ಯಾಸದಿಂದ ಮಾತ್ರ ಸಾಧ್ಯ, ದೃಢತೆಯಿಂದ ಸಾಧಿಸಿ.
 • 26 ದೇವರು ಶರಣಾಗತರನ್ನು ಎಂದಿಗೂ ಕೈ ಬಿಡುವುದಿಲ್ಲ.
 • 27 ಶ್ರೇಷ್ಠ ಉದ್ಧೇಶಗಳನ್ನು ಶ್ರೇಷ್ಠ ವರಗಳಿಂದ ಪೂರ್ತಿಗೊಳಿಸುತ್ತಾನೆ.
 • 28 ದೇವರ ಪ್ರಾರ್ಥನೆಯು ಅವನ ಒಲುಮೆಯ ಬಲವನ್ನು ಪಡೆಯುವ ಉಪಾಯವಾಗಿದೆ.
 • 29 ಶರಣರು ಮಾತ್ರ ದೇವನ ಇರುವಿಕೆಯನ್ನು ಬಲ್ಲರು.
 • 30 ದೇವರು ತನ್ನ ನಂಬಿದ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು.
 • 31 ತಪ್ಪದೇ ಪ್ರತಿದಿನ ಪ್ರವಚನ ಕೇಳು, ಮುಂದೆ ಜ್ಞಾನಿಯಾಗುವೆ.
 • 32 ಒಳ್ಳೆತನದಿಂದ ಕೆಟ್ಟತನವನ್ನು ಸೋಲಿಸಿ ಜಯಶೀಲನಾಗು.
 • 33 ಪರಮಾತ್ಮನು ನಿನಗೆ ಜ್ಞಾನವನ್ನು ವಿವೇಕವನ್ನು ಅನುಗ್ರಹಿಸಿದ್ದಾನೆ, ಜಾಗೃತ ಮಾಡಿಕೊ.
 • 34 ನಿತ್ಯಲಿಂಗಪೂಜೆಯಿಂದ ನಿಮಗೆ ಶಾಂತಿ ಸಮೀಪವಾಗುತ್ತಿದೆ.
 • 35 ಜ್ಞಾನದ ಬಲದಿಂದ ದೀನರು ದೇಶವನ್ನು ಅನುಭವಿಸುವರು.
 • 36 ಕೋಪವು ಪಾಪವಾಗಿದ್ದು ಕೆಡುಕಿಗೆ ಕಾರಣವಾಗುವುದು.
 • 37 ಲಿಂಗವನ್ನು ನೋಡುತ್ತಾ ಮೌನವಾಗಿ ದೇವನೊಡನೆ ಮಾತಾಡಿ.
 • 38 ದೈವ ಜ್ಞಾನವೇ ಸಕಲ ಕಾರ್ಯಗಳಿಗೆ ಕ್ರಿಯಾಶಕ್ತಿ.
 • 39 ತಪ್ಪು ಮಾಡದವರ ಮುಖವು ಲಜ್ಜೆಯಿಂದ ಕೆಡುವುದೇ ಇಲ್ಲ.
 • 40 ವಚನ ಸಾಹಿತ್ಯದಿಂದ ಜ್ಞಾನವನ್ನು ಪಡೆ ವಿವೇಕವನ್ನು ಸಂಪಾದಿಸು.
 • 41 ದೇವರನ್ನು ಬಿಟ್ಟು ನೀವು ಏನೂ ಸಾಧಿಸಲಾರಿರಿ.
 • 42 ದೇವರು ಪರಮ ದಯಾಮಯನೂ ಕನಿಕರವುಳ್ಳವನೂ ಆಗಿದ್ದಾನೆ.
 • 43 ದೇವರನ್ನು ಪೂರ್ಣವಾಗಿ ನಂಬಿದವನಿಗೆ ಆಶ್ರಯವಿದ್ದೇ ಇದೆ.
 • 44 ದೇವರು ಬ್ರಹ್ಮಾಂಡದ ಒಡೆಯನಾಗಿದ್ದು ಎಲ್ಲವೂ ಅವನಿಂದಲೇ ಸೃಷ್ಟಿಸಲ್ಪಟ್ಟಿವೆ.
 • 45 ನಮ್ಮ ಪೂರ್ವಿಕರು ಕಲ್ಪಿಸಿ ಕೊಟ್ಟ ದೇವರುಗಳು ದೇವರಲ್ಲ ನಿರಾಕಾರವಾದ ದೇವರನ್ನು ರೂಪಿಸಿಕೊಡಲು ಸಾಧ್ಯವಿಲ್ಲ.
 • 46 ಮಾನವ ಜನ್ಮಕ್ಕೆ ಬಂದು ನಿರಾಕಾರ ಶಿವನನ್ನು ಸಾಕ್ಷಾತ್ಕಾರ ಮಾಡಿಕೊಳ್ಳದಿದ್ದರೆ ಮಾನವ ಜನ್ಮ ವ್ಯರ್ಥವಾಗುತ್ತದೆ.
 • 47 ಲಿಂಗಧ್ಯಾನ ಮತ್ತು ಶಿವಯೋಗ ಶಿವನನ್ನು ತಲುಪುವ ಅಂತರ್‍ಜಾಲ.
 • 48 ನಂಬಿದವರಿಗೆ ದೇವರು ಧಾರಾಳವಾಗಿ ಅನುಗ್ರಹಿಸುವನು.
 • 49 ಸತ್ಯಶುದ್ಧ ಕಾಯಕದಿಂದ ಸಂಪಾದಿಸಿದ ಆಹಾರವನ್ನು ಮಾತ್ರ ಸ್ವೀಕರಿಸು.
 • 50 ಒಳ್ಳೆತನದಿಂದ ಕೆಟ್ಟತನವನ್ನು ಸೋಲಿಸು, ದ್ವೇಷಿಸಬೇಡ.
 • 51 ನಿನ್ನ ಕಷ್ಟಗಳು ನಿನಗೆ ಉತ್ತಮ ಅನುಭವ ಕೊಡುತ್ತವೆ, ಕಷ್ಟಗಳಿಂದ ಲಾಭವಿದೆ.
 • 52 ಲೋಕದ ವ್ಯವಹಾರಗಳನ್ನು ನಡೆಸುತ್ತಿರುವವನು ಸೃಷ್ಟಿಕರ್ತ ನಿರಾಕಾರ ಶಿವನೇ ಆಗಿದ್ದಾನೆ.
 • 53 ಸತ್ಯವನ್ನು ನುಡಿಯುವವನು ಸದಾ ಹಸನ್ಮುಖಿಯಾಗಿರುತ್ತಾನೆ. ಸತ್ಯವೇ ದೇವರು.
 • 54 ದೇವರು ದೀನರಿಗೆ ಯಾವಾಗಲೂ ಆಧಾರವಾಗಿರುತ್ತಾನೆ, ಗುರುತಿಸುವ ಪ್ರಯತ್ನ ಮಾಡಿ.
 • 55 ದೇವರು ನ್ಯಾಯವನ್ನು ನುಡಿಯುವ ನಾಲಿಗೆಯ ಮೇಲಿರುವನು.
 • 56 ದೇವರು ಎನ್ನುವ ನಿನ್ನ ತಂದೆಯೊಬ್ಬನಿದ್ದಾನೆಂದು ಸದಾ ನೆನಸಿಕೊ.
 • 57 ಆತ್ಮವನ್ನು ಪರಮಾತ್ಮನಲ್ಲಿ ವಿಲೀನಗೊಳಿಸುವ ಅಭ್ಯಾಸದಲ್ಲಿ ತೊಡಗಿಕೊ.
 • 58 ನಿನ್ನ ನಿಸ್ವಾರ್ಥ ಸತ್ಕಾರ್ಯಕ್ಕೆ ಫಲ ತಪ್ಪದು.
 • 59 ದೇವರು ನಂಬಿದ ಭಕ್ತರನ್ನು ಎಂದಿಗೂ ಕೈ ಬಿಡುವುದಿಲ್ಲ.
 • 60 ದೇವರು ನನ್ನ ಸಹಾಯಕ್ಕಿರಲು ಯಾರಿಗೂ ಭಯ ಪಡುವುದಿಲ್ಲ.
 • 61 ನಿಮ್ಮ ಕಷ್ಟಗಳನ್ನು ದೇವರಿಗಲ್ಲದೆ ಮತ್ತಾರಿಗೂ ಹೇಳಿಕೊಳ್ಳಬೇಡಿ.
 • 62 ಯಾವ ಕಾರ್ಯವೂ ಪರಮಾತ್ಮನಿಗೆ ಅಸಾಧ್ಯವಲ್ಲ ಅವನು ಸರ್ವಶಕ್ತ.
 • 63 ಕರುಣಿಸೆಂದು ಕಣ್ಣೀರಿಟ್ಟರೆ ಕಣ್ಣೀರನ್ನೆಲ್ಲಾ ಒರಸಿ ಬಿಡುವನು.
 • 64 ಭೂಲೋಕದಲ್ಲಿ ನೀನು ಪಡೆದ ಎಲ್ಲಾ ವಸ್ತುಗಳು ದೇವರದ್ದು ಅವನಿಗೆ ಕೃತಜ್ಞತಾ ಸ್ತುತಿಮಾಡು.
 • 65 ದೇವರು ನಮ್ಮ ಹತ್ತಿರವೇ ಇದ್ದಾನೆ ನಾವು ಮಾತ್ರ ಅವನಿಂದ ದೂರವಿದ್ದೇವೆ.
 • 66 ನಂಬಿಕಸ್ತರನ್ನು ದೇವರು ಎಂದಿಗೂ ಕೈಬಿಡದೆ ಕಾಪಾಡುತ್ತಾನೆ.
 • 67 ದೇವರು ಆಗಮ್ಯ ಆಗೋಚರನು ನಿರೀಕ್ಷೆಗೆ ನಿಲುಕದವನು.
 • 68 ದೇವರ ನಾಮ ಪಟಿಸಲು ನಾಲಿಗೆಯನ್ನು ಮೀಸಲಿಡು.
 • 69 ಬೇಡಿದವರಿಗೆ ಕೃಪೆ ಮಾಡಲು ದೇವರು ಸದಾ ಕಾಯುತ್ತಾನೆ.
 • 70 ನಕಾರಾತ್ಮಕ ಚಿಂತನೆಗಳನ್ನು ಮಾಡದೆ ದೇವರ ಮೇಲೆ ನಂಬಿಕೆ ಇಡಿರಿ.
 • 71 ದೇವರು ನಂಬಿದ ಭಕ್ತರನ್ನು ಪ್ರಾಣಾಪಾಯದಿಂದ ತಪ್ಪಿಸುತ್ತಾನೆ.
 • 72 ದೇವರಿಗಾಗಿ ಬೆಟ್ಟ ಸುತ್ತಬೇಡಿ ಬೆಟ್ಟವನ್ನು ದೇವರೇ ಸೃಷ್ಟಿಸಿದ್ದು.
 • 73 ದೈವಜ್ಞಾನವನ್ನು ನಿನ್ನಂತರಂಗದ ಬೆಳಕನ್ನಾಗಿ ಮಾಡಿಕೊ.
 • 74 ನಂಬಿದ ಭಕ್ತರಿಗೆ ದೇವರು ಮನಸ್ಸಾಗಿ ಮಾರ್ಗವಾಗಿ ನಿಲ್ಲುತ್ತಾನೆ.
 • 75 ದೇವರಲ್ಲಿನ ದೃಢ ಭಕ್ತಿ ಜೀವನ ಸಫಲತೆಯ ಸಾಕ್ಷಿ.
 • 76 ಭಗವಂತನ ಮೇಲಿನ ಭರವಸೆ ಬಾಳಿನ ಸಫಲತೆ.
 • 77 ದೀನರ ಕೊರತೆಯನ್ನರಿತು ಸಹಾಯಕ್ಕೆ ನಿಲ್ಲಿರಿ ಇದು ಅಂದಿನ ದೇವರ ಪೂಜೆ.
 • 78 ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ದೇವರು ಮತ್ತೊಬ್ಬರನ್ನು ಪ್ರೇರೇಪಿಸುತ್ತಾನೆ.
 • 79 ನಿಮ್ಮಲ್ಲಿ ಸದಾ ಕರುಣೆ, ದಯೆ, ಪ್ರೀತಿ, ವಾತ್ಸಲ್ಯ, ಮಮತೆ ತುಂಬಿರಲಿ ಇವು ದೇವರ ಅಂಶಗಳು.
 • 80 ಸಮಯ ಬಂದಾಗ ಭಕ್ತರನ್ನು ಸಕಾಲದಲ್ಲಿ ಮೇಲಕ್ಕೆ ತರುವನು.
 • 81 ಗಣ್ಯರನ್ನು ನಾಚಿಸುವುದಕ್ಕೆ ದೇವರು ಗಣನೆಗೆ ಬಾರದವರನ್ನು ಆಯ್ದುಕೊಳ್ಳುತ್ತಾನೆ.
 • 82 ದೇವರು ಬೆಳಕಿನ ರೂಪದಲ್ಲಿದ್ದು ನಂಬಿದವರ ಬಾಳಲ್ಲಿ ಬೆಳಕಾಗುವನು.
 • 83 ಕ್ಷಮಾಪಣೆ ಕೇಳಿದವರಿಗೆ ಕ್ಷಮಿಸಿ ದೇವರು ಬದುಕಲು ಮತ್ತೊಂದು ಅವಕಾಶ ಕೊಡುವನು.
 • 84 ಪರಮಾತ್ಮನ ಕೃಪೆಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ ಅವನಿಗಾಗಿ ಚಿಂತಿಸಿ.
 • 85 ಸತ್ಕರ್ಮಮಾಡಿ ಸತ್ಪಲಗಳಿಗಾಗಿ ಸಮಾಧಾನವಾಗಿ ಕಾಯಿರಿ ನಿರಾಶೆ ಬೇಡ.
 • 86 ಪ್ರಾರ್ಥನೆಯಲ್ಲಿ ಬೇಡುವುದಾದರೆ ಶಾಶ್ವತವಾದುದನ್ನು ಬೇಡಿರಿ, ಲೌಖಿಕ ಬೇಡಿಕೆಗಳು ಬೇಡ.
 • 87 ಶರಣರ ವಾಕ್ಯಗಳು ಸಜೀವವಾಗಿದ್ದು ಕಾರ್ಯಸಾಧನೆಯ ಶಕ್ತಿಗಳು.
 • 88 ಶರಣರ ತತ್ವಗಳು ಧೈರ್ಯವನ್ನು, ರಕ್ಷಣೆಯನ್ನು ಉಂಟುಮಾಡುತ್ತವೆ.
 • 89 ಸೃಷ್ಟಿಕರ್ತನ ಧ್ಯಾನದಲ್ಲಿಯೇ ಕರ್ತವ್ಯ ಮಾಡುವವನಿಗೆ ಪ್ರತ್ಯೇಕ ಪೂಜೆ ಧ್ಯಾನ ಬೇಕಿಲ್ಲ.
 • 90 ಕೊನೆಗೆ ದೇವರ ಸಂಕಲ್ಪವೇ ನಡೆಯುತ್ತದೆ, ತಾಳ್ಮೆ ತೆಗೆದುಕೊ.
 • 91 ದೇವರು ಒಳ್ಳೆಯದನ್ನೇ ಅನುಗ್ರಹಿಸುತ್ತಾನೆ, ಅದು ಅವನ ಕೃಪೆ.
 • 92 ದೇವರು ಏಕೈಕನಾಗಿದ್ದು ಇವನಿಗೆ ಸಹಾಯಕ ದೇವರುಗಳಾರೂ ಇಲ್ಲ.
 • 93 ಪರಿಮಳದಂತೆ ದೇವರನ್ನು ಬೆರೆತು ಬಯಲಲ್ಲಿ ಬಯಲಾಗಿ ಬ್ರಹ್ಮಾನಂದರಾಗಿ.
 • 94 ಉರಿ ಉಂಡ ಕರ್ಪೂರದಂತೆ ಕರ್ತನಲ್ಲಿ ಬೆರೆತು ನಿಮ್ಮನ್ನು ಕಳೆದುಕೊಳ್ಳಿರಿ.
 • 95 ದೇವರ ಭಯವು ಪಾಪ ಮಾಡದಂತೆ ತಡೆದು ಜ್ಞಾನ ಮಾರ್ಗ ತೋರುತ್ತದೆ.
 • 96 ಭಯ ಪಡುವವರಿಗೆ ದೇವರು ಬಂಧುವಾಗಿ ಬಂದು ಸಂತೈಸುತ್ತಾನೆ.
 • 97 ನಿಮ್ಮ ಸನ್ಮಾನವನ್ನು ನಿಮ್ಮ ತಂದೆ ತಾಯಿಗೆ ಸಮರ್ಪಿಸಿ.
 • 98 ಭಕ್ತರ, ಮಾನ, ಅಪಮಾನ ಹಾನಿ, ವೃದ್ಧಿ ಪರಮಾತ್ಮನದ್ದು.
 • 99 ಭೂಲೋಕದ ನಾಸ್ತಿಕರಿಗೆ ಕೃಪೆ ಮಾಡಲು ದೇವರು ಸದಾ ಕಾಯುತ್ತಾನೆ.
 • 100 ಆಶ್ರಯದಾತನೂ, ಅನ್ನದಾತನೂ, ಪ್ರಾಣದಾತನೂ ಆದ ಏಕೈಕ ಪರಮಾತ್ಮ ನಮ್ಮೆಲ್ಲರ ತಂದೆ.
 • 101 ನಿಮ್ಮ ಅಗತ್ಯಗಳು ನಿಮಗಿಂತ ಚೆನ್ನಾಗಿ ದೇವರಿಗೆ ಗೊತ್ತಿದೆ.
 • 102 ಭೂಲೋಕದಲ್ಲಿ ಎಲ್ಲಾ ಸಮಸ್ಯೆಗಳಿಗೆ, ವ್ಯಾದಿಗಳಿಗೆ ಒಂದೇ ಪರಿಹಾರ ಅದು ಭಗವಂತನ ಓಂ ನಮಃ ಶಿವಾಯ ನಾಮಸ್ಮರಣೆ.
 • 103 ಸಾಧನೆಯಲ್ಲಿ ಎಷ್ಟೇ ಕಷ್ಟಗಳು ಬಂದರೂ ಒಳ್ಳೆಯದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ.
 • 104 ದೇವರು ಸಾಧಕರ ಸ್ವತ್ತು ಅಂತಹ ಸ್ವತ್ತಿಗಾಗಿ ನಿರಂತರ ಪ್ರಯತ್ನವಿರಲಿ.
 • 105 ಸತ್ಯವಂತರ ಮಧ್ಯದಲ್ಲಿ ಬದುಕಿಸು ದೇವ ನಾನು ಧನ್ಯನಾಗುತ್ತೇನೆ.
 • 106 ಸತ್ಯವು ನಮ್ಮ ಉಸಿರಾಗಲಿ ಪರಮಾತ್ಮ ನಮ್ಮ ಪ್ರಾಣವಾಗಲಿ.
 • 107 ಶತ್ರುಗಳನ್ನು ಪ್ರೀತಿಸುವುದರಿಂದ ಶತ್ರುಗಳನ್ನು ಗೆಲ್ಲಬಹುದು.
 • 108 ಭಯಪಡಬೇಡಿ ನಮ್ಮ ದೇವರೇ ನಮಗೆ ರಕ್ಷಕನಾಗಿರುತ್ತಾನೆ.
 • 109 ಪರಿಶುದ್ಧವಾಗಿರುವವರು ಸದಾ ದೇವರೊಂದಿಗಿರುತ್ತಾರೆ. ಪರಿಶುದ್ಧತೆಗೆ ಬದ್ಧರಾಗಿರಿ.
 • 110 ನಿಮ್ಮ ಕಷ್ಟಗಳನ್ನು, ಚಿಂತೆಗಳನ್ನು ದೇವರ ಮೇಲಾಕಿ, ನಿಶ್ಚಿಂತೆಯಾಗಿರುವುದನ್ನು ಅಭ್ಯಾಸ ಮಾಡಿ.
 • 111 ಪರಮಾತ್ಮನು ಸರ್ವಶಕ್ತನು ಅವನಿಗೆ ಸರಿಸಮಾನರು ಯಾರು ಇಲ್ಲ.
 • 112 ನಂಬಿದವರಿಗೆ ನಿತ್ಯಜೀವನದಲ್ಲಿ ಸಂಜೀವಿನಿಯಾಗಿರುತ್ತಾನೆ.
 • 113 ನಮ್ಮ ದೇಹದಲ್ಲಿ ಸುಪ್ತವಾಗಿರುವ ಭಗವಂತನನ್ನು ಕಾಣಲು ಶಿವಯೋಗ ಮಾಡಬೇಕು.
 • 114 ಕಷ್ಟವೆಂಬುದು ಪರೀಕ್ಷೆ ಕಾಲ, ಉತ್ತಮಸ್ಥಿತಿಯನ್ನು ದೇವರು ದಯ ಪಾಲಿಸುವನು.
 • 115 ಮೌನ ಧ್ಯಾನದಲ್ಲಿ ಅಂತರ್ಮುಖಿಯಾಗಿ ದೇವರ ಜೊತೆ ಮಾತನಾಡಿರಿ.